ದಿನಾಂಕ: 18 ಡಿಸೆಂಬರ್ 2011, ಭಾನುವಾರ ಬಲ್ಲಾಳರಾಯನ ದುರ್ಗ ಕ್ಕೆ ಚಾರಣ
- ಬೆಳಗ್ಗೆ 7ಕ್ಕೆ ಕೊಟ್ಟಿಗೆಹಾರ ವಿಸ್ಮಯ ಪ್ರತಿಷ್ಠಾನ ಕಚೇರಿಯಿಂದ ಆರಂಭ
- ಕೊಟ್ಟಿಗೆಹಾರದಿಂದ 25ಕಿ.ಮೀ ದೂರದಲ್ಲಿರುವ ದುರ್ಗದ ಹಳ್ಳಿಗೆ ಜೀಪ್ ನಲ್ಲಿ ಪಯಣ
- ಅಲ್ಲಿಂದ 7 ಕಿ.ಮೀ ಚಾರಣ
- ಸಂಜೆ 5 ಗಂಟೆಗೆ ಕೊಟ್ಟಿಗೆಹಾರಕ್ಕೆ ವಾಪಾಸ್
ಸಂಪರ್ಕಿಸಿ:
ಬಾಪು ದಿನೇಶ್ : 94801 98162
ಗಣೇಶ್ ಮಗ್ಗಲಮಕ್ಕಿ : 94483 05990
ಬೆಳಗ್ಗಿನ ಉಪಹಾರ, ಮಧ್ಯಾಹ್ನ ಊಟ ಸಂಜೆ ಕಾಫಿ ವ್ಯವಸ್ಥೆ ಇರುತ್ತದೆ.
ನನ್ನ ತೇಜಸ್ವಿ ಪುಸ್ತಕ ಬಿಡುಗಡೆ
ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ ಉದ್ಘಾಟನೆ

ಸ್ಥಳ: ಕೊಟ್ಟಿಗೆಹಾರ ದಿನಾಂಕ: 21/10/2010.
ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ಟೇಪ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.
ವಿಸ್ಮಯಾ ಪ್ರತಿಷ್ಠಾನದ ಸದಸ್ಯರಾದ ಕೆಂಜಿಗೆ ಪ್ರದೀಪ್, ವಿನಯ ಪ್ರಸಾದ್, ಗಣೇಶ್ ಮಗ್ಗಲಮಕ್ಕಿ, ಧನಂಜಯ ಜೀವಾಳ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಪ ಆಯುಕ್ತ ದಯಾನಂದ, ಮಾದೇಗೌಡ, ಮೂಡಿಗೆರೆಯ ಎಎಫ್ ಸಿ ರೆಡ್ಡಿ, ಆರ್ ಎಫ್ ಒ ಹರ್ಷವರ್ಧನ್, ತಹಸೀಲ್ದಾರ್ ಶಿವೇಗೌಡ, ಎಇಇ ಮಲ್ಯ ಹಾಗೂ ನಿರ್ಮಿತಿ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಳಿದಂತೆ ಊರಿನ ಪ್ರಮುಖರಾದ ಹಳೆಕೋಟೆ ರಮೇಶ್, ಸುರೇಶ್ ಚಂದ್ರ ದತ್ತ, ಬಾಲಸುಬ್ರಮಣ್ಯಂ, ದಿವ್ಯ ಪ್ರಸಾದ್, ಸುಧೀರ್, ಹರ್ಷವರ್ಧನ್, ಬಾಪು ದಿನೇಶ್ ಅವರು ಸಂಶೋಧನಾ ಕೇಂದ್ರಕ್ಕೆ ಶುಭ ಹಾರೈಸಿದ್ದಾರೆ.
ಸುಮಾರು 45 ನಿಮಿಷಗಳ ಕಾಲ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಚನ್ನಪ್ಪಗೌಡ ಅವರು, ಟ್ರೆಕ್ಕರ್ ಗಳಿಗಾಗಿ ಸೈಕಲ್ ಘಟಕ ಹಾಗೂ ಮ್ಯೂಸಿಯಂ ಸಂಗ್ರಹಾಲಯವನ್ನು ಆದಷ್ಟು ಬೇಗ ಸ್ಥಾಪಿಸುವ ನಿರೀಕ್ಷೆಯಿದೆ. ಎಲ್ಲ ತೊಡರುಗಳನ್ನು ದಾಟಿ ಮುಂದೆ ಹೆಜ್ಜೆ ಇಡಬೇಕು. ಕೊಟ್ಟಿಗೆಹಾರದ ಈ ಕಚೇರಿ ಮೂಲಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.
|